Wednesday, January 7, 2009

ಮೊದಲನೆ ಮೈಸೂರು ಪಾಕ್.....!



ಪ್ರಿಯರೆ....
ಇದೋ ಇಲ್ಲಿದೆ ಮೈಸೂರು ಪಾಕ್!ಮೈಸೂರಿನ ಸ್ವಾರಸ್ಯಕರ ಸಂಗತಿಗಳು ಆಗಾಗ ನಿಮ್ಮ ಮನತಣಿಸಲು ಇಲ್ಲಿ ಕಾಣಿಸಿಕೊಳ್ಳುತ್ತವೆ.ಮೈಸೂರು ಪಾಕ್ ಎಂದರೆ ಸಿಹಿಯಷ್ಟೇ ಅಲ್ಲ,ಚಿಂತನಾರ್ಹ ಸಂಗತಿಗಳು ಇಲ್ಲಿ ಬೆಳಕು ಕಾಣುತ್ತವೆ.ಸೆಪ್ಪೆಯಂತೂ ಖಂಡಿತಾ ಆಗಿರಲಾರದು.ಮೈಸೂರು ಪಾಕಿಗೆ ನಿಮ್ಮ ಕೈ ಜೋಡಿಸಬಹುದು.ಮೈಸೂರಿಗೆ ಸಂಬಂಧಿಸಿದ ಸ್ವಾರಸ್ಯಗಳಿದ್ದರೆ ದಯವಿಟ್ಟು ತಿಳಿಸಿ.ಇಲ್ಲಿ ಪ್ರಕಟಿಸೋಣ.



ನಮ್ಮೂರಲ್ಲಿ ಮಹಾತ್ಮರ,ಪ್ರಸಿದ್ದರ ಹೆಸರಿನಲ್ಲಿ ರಸ್ತೆಯಿದೆ,ವೃತ್ತವಿದೆ ಎಂದು ನೀವು ಜಂಭಕೊಚ್ಚಬೇಡಿ.ನಮ್ಮೂರು ಮೈಸೂರಿನಲ್ಲಿ ಕೆಡಿ ಹೆಸರಲ್ಲೂ ರಸ್ತೆಯಿದೆ,ವೃತ್ತವಿದೆ...ಗೊತ್ತಾ...?
ಅರೆರೆ ಇದೇನು ಕೆಡಿ ಹೆಸರಲ್ಲೂ ರಸ್ತೆ,ವೃತ್ತವಿದೆಯಲ್ಲಾ ಮೈಸೂರಿನ ಸಂಸ್ಕೃತಿ ಇಷ್ಟೇನಾ ಎಂದು ಮೂಗು ಮುರಿಯಬೇಡಿ...... ಕೃಷ್ಣದೇವರಾಯ,ಕಾಳಿದಾಸರನ್ನುಪಂಕಾಗಿಏನೆನ್ನಬಹುದು ಹೇಳಿ? ಕೆ.ಡಿ!(Krishna Devaraya )..... ಮೈಸೂರಿನ ಪಡ್ಡೆ ಹೈಕಳ ಬಾಯಲ್ಲಿ ಕೃಷ್ಣದೇವರಾಯ ವೃತ್ತ ಕೆಡಿ ಸರ್ಕಲ್ ಆಗಿದೆ!ಕಾಳಿದಾಸ ರಸ್ತೆ ಕೆಡಿ ರೋಡ್ ಆಗಿದೆ. ಅಯ್ಯೋ ರಾ....!
~~~ಅಶೋಕ Uchangi***
ಚಿತ್ರಕೃಪೆ-ಇಂಡಿಯಾಫುಡ್‌ಫಾರೆವರ್

9 comments:

Ittigecement said...

ಅಶೋಕ್...

ಬಾಯಲ್ಲಿ ನೀರು ತರಿಸುವ "ಮೈಸೂರ್ ಪಾಕ"
ತೋರಿಸುತ್ತ...

ನಗಿಸುತ್ತಿದ್ದೀರಲ್ಲ...
ಜೋಕ ಹೇಳುತ್ತ...!

ಕ್ರಷ್ಣದೇವರಾಯ, ಕಾಳಿದಾಸರು..
ಕೇಡಿ ಯಾದದ್ದು ಮಾತ್ರ ...
ವಿಪರ್ಯಾಸವೇ ಸರಿ...

ಧನ್ಯವಾದಗಳು..

Ashok Uchangi said...

ಪ್ರಿಯ ಪ್ರಕಾಶ್
ಪ್ರಕಾಶಮಾನ ಪ್ರತಿಕ್ರಿಯೆಗೆ ಧನ್ಯವಾದ!
ಮೈಸೂರು ಪಾಕ್ ಸದಾ ಬಾಯಲ್ಲಿ ನೀರೂರಿಸುತ್ತಿರಬೇಕೆಂಬುದೇ ನನ್ನ ಆಸೆ.ನಿಮ್ಮ ಸಹಕಾರಬೇಕು ಅಷ್ಟೆ.
ನಮ್ಮಿಬ್ಬರಲ್ಲಿ ಚಂದದ ಪ್ರತಿಕ್ರಿಯೆ ಸ್ಫರ್ಧೆ ಆರಂಭವಾದಂತಿದೆ!
ಧನ್ಯವಾದಗಳು.

shivu.k said...

ಆಶೋಕ್,
ಮೈಸೂರ್ ಪಾಕ್ ನಂಗಿಷ್ಟ. ಅದರಲ್ಲೂ ಗುರು ಸ್ವೀಟ್ಸ್ ರವರ ಮೈಸೂರು ಪಾಕ್ ತುಂಬಾ ಇಷ್ಟ.
ಮತ್ತೆ ...
ಕ್ರಷ್ಣದೇವರಾಯ, ಕಾಳಿದಾಸರು..
ಕೇಡಿ ಯಾದದ್ದು ಮಾತ್ರ ...
ಕಿಡಿಗೇಡಿಗಳ ಕೆಲಸವೆಂದು ಮಾತ್ರ ಹೇಳಬಲ್ಲೆ...
ಥ್ಯಾಂಕ್ಸ್...

chiru said...

everyone living in mysore are inwardly aware that KD road or KD circle have nothig notorious about them.On the other hand KD Road is a AAM Admi's /samanya prajegala favorite hangout.

Ashok Uchangi said...

2 shivu :)
ಬನ್ನಿ ಮೈಸೂರಿಗೆ ಗುರು ಸ್ವೀಟ್ಸ್ ಗೆ ಹೋಗೋಣ.
ಧನ್ಯವಾದಗಳು..

2 Chiru
yes,KD road... I am sorry Kalidasa road is favorite spot for Mysoriens.
It is having such a beautiful name as Kalidasa raste.But we have shorten it awkwardly.
If you want kannada font help pls log on to
http://sampada.net/fonthelp
regards
ashok

vikramhegde said...

Ashok,

Among other mysore delicacies, I ca count Mysore dosei, Mysore Rasam, Mysore Idli. I had mentioned these in my blog, along with other things from Mysore, a few days ago though I was not so appreciative of Mysore Pak.

Unknown said...

ವಾವ್ ವಾವ್ ವಾವ್
ಪದಗಳನ್ನು ಎಲ್ಲಿಂದ ತಂದುಹೇಳಲಿ ಬಾಯಿತುಂಬಾ ನೀರೇ ನೀರು

Ashok Uchangi said...

vikram hegde,shreeshum

thanks for watching & commenting.
regards
ashok uchangi

ಬೆಂಗಳೂರು ರಘು said...

Ashok... ondu saari devanahalli samapeeda Vijayapurada mysore pak tinni.... i can bet you will not forget for life. this is on devanhalli - shiddlaghatta road..about <10KMs from devanahalli