Thursday, December 11, 2008

ನಮ್ಮ ಹೆಮ್ಮೆಯ ಶಿವು...

ಮೊದಲ ಬಹುಮಾನ ಬೆಂಗಳೂರಿನ ಶಿವು.ಕೆ ಅವರ ಚಿತ್ರ "ರೈನ್ಬೋ ಆನ್ ದಿ ಲ್ಯಾಂಡ್"

ನೀವು
ಬ್ಲಾಗ್ ಮಂಡಲದ ಅಭಿಮಾನಿಗಳಾಗಿದ್ದರೆ ಇವರ ಹೆಸರನ್ನು ಕೇಳಿರಬಹುದು.ತಮ್ಮಛಾಯಾಕನ್ನಡಿಬ್ಲಾಗ್ ನಿಂದ ಹೊಸಹೊಸ ಸಂಗತಿಗಳನ್ನು ತಮ್ಮ ನೆಚ್ಚಿನ ಹವ್ಯಾಸ ಛಾಯಾಚಿತ್ರಗ್ರಹಣ ಮೂಲಕ ಅಂದವಾದ ಚಿತ್ರಗಳನ್ನು ಸೆರೆಹಿಡಿದು ಅತ್ಯುತ್ಸಾಹದಿಂದ ಪ್ರಕಟಿಸುವ ಶಿವು ಅನೇಕ ಬ್ಲಾಗಿಗರಿಗೆ ಆಪ್ತಮಿತ್ರರು.ಇನ್ನು ಕೆಲವರಿಗೆ ಬ್ಲಾಗ್ಮಿತ್ರರು.ಅನೇಕ ಬ್ಲಾಗ್ ನಲ್ಲಿ ಶಿವುರವರ ಪ್ರತಿಕ್ರಿಯೆ ಇದ್ದೇಯಿರುತ್ತದೆ.
ಬೆಂಗಳೂರಿನ ಶಿವು ವೃತ್ತಿಯಲ್ಲಿ ನ್ಯೂಸ್ ಪೇಪರ್ ಏಜಂಟರು. ಪ್ರವೃತ್ತಿಯಲ್ಲಿ ಛಾಯಾಗ್ರಾಹಕರು,ಲೇಖಕರು.
ಇಲ್ಲಿ ಅವರ ಬಗ್ಗೆ ಬರೆಯಲು ಕಾರಣವಿದೆ.ಇವರು ಛಾಯಾಗ್ರಹಣವನ್ನು ಹವ್ಯಾಸವಾಗಿರಿಸಿಕೊಂಡು ಊರೂರು ಸುತ್ತುತ್ತಾ ಮನಮೋಹಕ ಚಿತ್ರಗಳನ್ನು ಸೆರೆಹಿಡಿಯುವ ಶಿವು ಅನೇಕ ಅಂತರಾಷ್ಟೀಯ ರಾಷ್ಟೀಯ ಛಾಯಾಚಿತ್ರ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ.ಪ್ರಶಸ್ತಿಗಳನ್ನೂ ಗಳಿಸಿದ್ದಾರೆ.
ಇವರು ಇತ್ತೀಚೆಗೆ ಫೆಡರೇಷನ್ ಆಫ್ ಇಂಡಿಯನ್ ಫೋಟೋಗ್ರಫಿಯಿಂದ ಅಂಗೀಕೃತಗೊಂಡ ಮೈಸೂರಿನ ಡಿಸ್ಟ್ರಿಕ್ಟ್ ಫೋಟೋ ಮತ್ತು ವಿಡಿಯೋಗ್ರಫಿ ಸಂಸ್ಥೆಯು ಏರ್ಪಡಿಸಿದ್ದ ರಾಷ್ಟ್ರ ಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಸ್ಪರ್ದೆಯಲ್ಲಿ ನಾಲ್ಕು ವಿಭಾಗಗಳಿದ್ದವು.

. ಪಿಕ್ಟೋರಿಯಲ್ ವಿಭಾಗ. .ನೇಚರ್ ವಿಬಾಗ .ವೈಲ್ಡ್ ಲೈಪ್ ವಿಭಾಗ . ಜರ್ನಲಿಸಂ ವಿಭಾಗ.

ರಾಷ್ಟ್ರೀಯ ಮಟ್ಟದ ಫೋಟೊಗ್ರಫಿ ಸ್ಪರ್ಧೆಯಲ್ಲಿ ಎಲ್ಲಾ ವಿಭಾಗಗಳಲ್ಲೂ ನಮ್ಮ ಕರ್ನಾಟಕದ ಛಾಯಾಚಿತ್ರಕಾರರೇ ಹೆಚ್ಚು ಪ್ರಶಸ್ಥಿ ಗಳಿಸಿರುವುದು ವಿಶೇಷ.
ಎಲ್ಲದಕ್ಕಿಂತ ಹೆಚ್ಚಿನ ವಿಶೇಷವೆಂದರೆ ನಮ್ಮ ಹೆಮ್ಮೆಯ ಶಿವು ಪಿಕ್ಟೋರಿಯಲ್ ವಿಭಾಗದಲ್ಲಿ ಮೊದಲ ಬಹುಮಾನ ಪಡೆದಿರುವುದು.ಇವರ ಮಿತ್ರರಾದ ಮಲ್ಲಿಕಾರ್ಜುನ ಡಿ.ಜಿ ಇವರು ಇದೇ ವಿಭಾಗದಲ್ಲಿ ಮೂರನೇ ಬಹುಮಾನ ಗಳಿಸಿದ್ದಾರೆ. ಅಭಿನಂದನೆಗಳು ಶಿವು,ಮಲ್ಲಿಕಾರ್ಜುನ್.
ಪ್ರಶಸ್ಥಿಗಳ ವಿವರ ಹೀಗಿದೆ.

ಕಲರ್ ಪಿಕ್ಟೋರಿಯಲ್ ವಿಭಾಗ:

ಮೊದಲ ಬಹುಮಾನ ಬೆಂಗಳೂರಿನ ಶಿವು.ಕೆ ಅವರ ಚಿತ್ರ "ರೈನ್ಬೋ ಆನ್ ದಿ ಲ್ಯಾಂಡ್"

ಎರಡನೇ ಬಹುಮಾನ ಪಶ್ಚಿಮ ಬಂಗಾಲದ ಭೂಲನ್ ಪಿ ಮಂಡಲ್ ರವರ ಚಿತ್ರ " ವಾಟರ್ ಸೋರ್ಸ್ ಅಟ್ ದೂದ್ದಾರ"

ಮೂರನೆ ಬಹುಮಾನ ಶಿಡ್ಲಘಟ್ಟದ ಡಿ.ಜಿ. ಮಲ್ಲಿಕಾರ್ಜುನರವರ ಚಿತ್ರ "ವಾಟರ್ ಪ್ಲೇ"ಗೆ ಬಂದಿದೆ.

ಸರ್ಟಿಫಿಕೇಟ್ ಆಫ್ ಮೇರಿಟ್ ಬೆಂಗಳೂರಿನ ಪ್ರಾಣೇಶ್ ಕುಲಕರ್ಣಿಯವರ ಚಿತ್ರ "ಅನ್ಬಿಲಿವಬಲ್" ಶಿಡ್ಲಘಟ್ಟದ ಡಿ.ಜಿ. ಮಲ್ಲಿಕಾರ್ಜುನರವರ "ಸೈಕಲ್ ಬಾಯ್" , ಪಶ್ಚಿಮ ಬಂಗಾಲದ ರಥನ್ ಚಂದ್ರ ಕರ್ಮಕಾರ್ ರವರ ಚಿತ್ರ "ಡ್ಯಾನ್ಸಿಂಗ್ ಪ್ಲಾಶ್", ಮತ್ತು ಮೈಸೂರಿನ ಮದುಸೂದನರವರ ಮಿಂಚಿನ ಅರಮನೆ ಚಿತ್ರಕ್ಕೆ ಲಭಿಸಿದೆ.


ನೇಚರ್ ವಿಭಾಗ :


ಮೊದಲನೆ ಬಹುಮಾನ ಮೈಸೂರಿನ ಜಿ. ಎಸ್. ರವಿಶಂಕರರವರ ಚಿತ್ರ "ಬ್ಲೂ ಟೈಲಿಡ್ ಗ್ರ್ಈನ್ ಬೀ ಈಟರ್ ಮೇಟಿಂಗ್ "

ದ್ವಿತೀಯ ಬಹುಮಾನ ಬೆಂಗಳೂರಿನ ಎನ್. ಕೆ ಆರುಣ್ ಕುಮಾರ್ ಅವರ ಚಿತ್ರ್ "ಬ್ರಾಮಿಣಿ ಕೈಟ್ ಫ್ಲೈಟ್ ವಿತ್ ಫೀಡ್"

ಮೂರನೆ ಬಹುಮಾನ ಮೈಸೂರಿನ ಮಹೇಶ್ ರವರ ಚಿತ್ರ " ಎಲಿಫೆಂಟ್ ಸ್ಪಾರಿಂಗ್" ಚಿತ್ರಕ್ಕೆ ಲಭಿಸಿದೆ.



ವೈಲ್ಡ್ ಲೈಫ್ ವಿಭಾಗ.

ಮೊದಲನೆ ಬಹುಮಾನ ಬೆಂಗಳೂರಿನ ಎಸ್. ಮಲ್ಲಿಕಾರ್ಜುನರವರ ಚಿತ್ರ "ಗ್ರೇಟರ್ ಪ್ಲೆಮಿಂಗೋಸ್"

ಎರಡನೆ ಬಹುಮಾನ ಮೈಸೂರಿನ ಕೆ. ಎಮ್. ನಾರ್ಆಯಣಸ್ವಾಮಿರವರ ಚಿತ್ರ "ಬ್ಲೂ ಜೆ ವಿತ್ ಫೀಡ್"

ಮೂರನೆ ಬಹುಮಾನ ಬೆಂಗಳೂರಿನ ಜಿ. ಇಸ್. ಕೃಷ್ಣಮೂರ್ತಿರವರ ಚಿತ್ರ "ಟೈಗರ್ ವಿತ್ ಕಿಲ್ "


ಇದಲ್ಲದೆ ವಿಭಾಗದಲ್ಲಿ "ಬೆಸ್ಟ್ ಆಕ್ಷನ್ ವೈಲ್ಡ್ ಲೈಫ್" ಪ್ರಶಸ್ಥಿಯೂ ಪಶ್ಚಿಮ ಬಂಗಾಲದ ಅನೂಪ ಗುಹರವರು

"ಬೆಸ್ಟ್ ರೇರ್ ಬರ್ಡ್" ಪ್ರಶಸ್ಥಿಯೂ ಮೈಸೂರಿನ ರವಿಶಂಕರ್ರವರಿಗೆ, "ಬೆಸ್ಟ್ ಆಕ್ಷನ್ ಬರ್ಡ್" ಮೈಸೂರಿನ ಎನ್. ಮುರಳಿರವರಿಗೆ, ಬೆಸ್ಟ್ ವೈಲ್ಡ್ ಲೈಫ್ " ಬಹುಮಾನವು ಬೆಂಗಳೂರಿನ ಎಸ್.ಪಿ. ನಾಗೇಂದ್ರರವರಿಗೆ ಲಭಿಸಿದೆ.



ಫೋಟೋ ಜರ್ನಲಿಸಂ ವಿಭಾಗ


ಮೊದಲನೆ ಬಹುಮಾನ ಮೈಸೂರಿನ ಹಂಪಾ ನಾಗರಾಜ ರವರ ಚಿತ್ರ "ಲೆಪ್ಪರ್ಡ್ ಅಟ್ಯಾಕ್"

ದ್ವಿತೀಯ ಬಹುಮಾನ ಮೈಸೂರಿನ ಎಸ್. ಅರ್. ಮದುಸೂದನ್ ರವರ ಚಿತ್ರ "ಊಟದ ಹಾದಿಯಲ್ಲಿ ಒಂದು ಕ್ಷಣ"

ಮೂರನೆ ಬಹುಮಾನವೂ ಮೈಸೂರಿನ ಎಮ್. ಎನ್. ಲಕ್ಷ್ಮಿನಾರಯಣ ಯಾದವರವರ ಚಿತ್ರ " ಲಿಫ್ಟಿಂಗ್ ಆಫ್ ಜಂಬೋ

ಇನ್ನು "ಬೆಸ್ಟ್ ಜರ್ನಲಿಸಂ ಫೋಟೊ" ಪ್ರಶಸ್ಥಿ ಪಡೆದವರು ರಾಜಸ್ಥಾನದ ಅಕ್ಸಾರಿಕಾಲಕ್.

ಪ್ರಶಸ್ತಿ ಪಡೆದವರಿಗೆಲ್ಲರಿಗೂ ಅಭಿನಂದನೆಗಳು.



ಎಲ್ಲಾ ನಾಲ್ಕು ವಿಭಾಗಗಳಿಗೆ ದೇಶದ ಎಲ್ಲಾ ಮೂಲೆಗಳಿಂದಲೂ ಸುಮಾರು ೨೦೦ ಛಾಯಾಚಿತ್ರಗ್ರಾಹಕರು ೨೦೦೦ ಸಾವಿರಕ್ಕೂ ಹೆಚ್ಚು ಚಿತ್ರಗಳನ್ನು ಸ್ಪರ್ಧೆಗೆ ಕಳುಹಿಸಿದ್ದರು.


ಇವುಗಳನ್ನು ನಾಲ್ಕಾರು ಸುತ್ತುಗಳಲ್ಲಿ ಆಯ್ಕೆ ಮಾಡಿದವರು ಮೈಸೂರಿನ ಪ್ರಖ್ಯಾತ ಹಿರಿಯ ಛಾಯಾಗ್ರಾಹಕರಾದ ಎಸ್. ತಿಪ್ಪೆಸ್ವಾಮಿ, ಎಸ್. ರಾಮಪ್ರಸಾದ್, ಕೃಷ್ಣೋಜಿರಾವ್, ಮತ್ತು ಬೆಂಗಳೂರಿನ ಟಿ. ಕೆಂಪಣ್ಣ.


ಬಹುಮಾನ ಪಡೆದ ಮತ್ತು ಪ್ರದರ್ಶನಕ್ಕೆ ಆಯ್ಕೆಯಾದ ಚಿತ್ರಗಳನ್ನು ಇದೇ ಡಿಸೆಂಬರ್ ತಿಂಗಳ ಕೊನೆಯ ೨೬, ೨೭, ೨೮ ಮೂರು ದಿನಗಳ ಕಾಲ ಮೈಸೂರಿನಲ್ಲಿ ನಡೆಯಲಿದೆ.

ನೀವೆಲ್ಲರೂ ಛಾಯಾಚಿತ್ರ ಪ್ರದರ್ಶನಕ್ಕೆ ಮೈಸೂರಿಗೆ ಬನ್ನಿ.

6 comments:

shivu.k said...

ಆಶೋಕ್,
Thank your very much.
ನನಗೆ ಮೈಸೂರಿನಲ್ಲಿ ಬಹುಮಾನ ಬಂದ ಚಿತ್ರವನ್ನು ನಿಮ್ಮ ಬ್ಲಾಗಿನಲ್ಲಿ ಹಾಕಿದ್ದನ್ನು ನೋಡಿ ಸಂತೋಷವಾಯಿತು. ನೀವು ಬ್ಲಾಗಿಗರ ಪ್ರತಿಭೆಯನ್ನು ಗುರುತಿಸಿ ಅಭಿನಂದಿಸಿದ್ದಕ್ಕೆ ತುಂಬಾ ಧನ್ಯವಾದಗಳು. ನಿಮ್ಮ ಹೀಗೆ ಮುಂದುವರಿಯಲಿ...

Santhosh Rao said...

ನಿಜ ಶಿವೂ ಅವರು ಅದ್ಭುತ ಛಾಯಾಗ್ರಾಹಕ ...

ಅಂದ ಹಾಕೇ ..ಉಚಂಗಿ ..ನಮ್ ತಾಯಿ ಊರು :)

ರಾಘವೇಂದ್ರ ಕೆಸವಿನಮನೆ. said...

ಮಹೇಶ್,
ಮಲ್ಲಿಗೆಯ ಕಂಪು ಬಹಳ ಸೊಗಸಾಗಿದೆ. ಚೆಂದ ಬರೆಯುತ್ತೀರಿ. ನಾನೂ ಮಲೆನಾಡಿಗ. ಈಗ ಕೆಲವರ್ಷಗಳಿಂದ ಮೈಸೂರಿನ ಕಂಪು ಸವಿಯುತ್ತಲಿದ್ದೇನೆ.
ಬಿಡುವಾದಾಗ ನನ್ನ ಬ್ಲಾಗಿಗೊಮ್ಮೆ ಭೇಟಿ ಕೊಡಿ.www.enchara.blogspot.com
-ರಾಘವೇಂದ್ರ ಕೆಸವಿನಮನೆ.

ಚಿತ್ರಾ ಸಂತೋಷ್ said...

ಅಶೋಕ್ ಸರ್..ನನ್ನ ಬ್ಲಾಗಿಗೆ ಭೇಟಿ ನೀಡಿದ್ದಕ್ಕೆ ಧನ್ಯವಾದಗಳು. ಅಂದಹಾಗೆ ಎಲ್ಲರಿಗೂ ನನ್ನ ಅಭಿನಂದನೆಗಳು..ಶಿವಣ್ಣ ಮತ್ತು ಮಲ್ಲಿಯಣ್ಣನಿಗೆ ಮತ್ತೊಮ್ಮೆ ಅಭಿನಂದನೆಗಳು
-ಚಿತ್ರಾ

ಮಲ್ಲಿಕಾರ್ಜುನ.ಡಿ.ಜಿ. said...

ಪ್ರಿಯ ಅಶೋಕ್,
ಅನಂತ ಧನ್ಯವಾದಗಳು.ಶಿವು ನಿಮ್ಮ ಬಗ್ಗೆ ಹೇಳಿದ್ದರು.ಒಂದು ಪೇಪರಿನವರು ಮತ್ತೊಂದು ಪೇಪರಿನವರ ಬಗ್ಗೆ ಬರೆಯೋದು, ಹೊಗಳೂದು ಮಾಡುವುದಿಲ್ಲ. ಹಾಗೇ ಬ್ಲಾಗ್ ಲೋಕದಲ್ಲೂ ಅಂದುಕೊಂಡಿದ್ದೆ. ನನ್ನಲ್ಲಿ ಬ್ರಾಡ್ ಬ್ಯಾಂಡ್ ಇನ್ನೂ ಬಂದಿಲ್ಲ. ಹಾಗಾಗಿ ಹೆಚ್ಚು ಬ್ಲಾಗ್ ಗಳನ್ನು ನೋಡೋದು, ಅದರಲ್ಲಿ ಬರೆಯೋದು ಆಗಲ್ಲ.Bye

Ashok Uchangi said...

ಪ್ರಿಯರೆ
ನಿಮ್ಮೆಲ್ಲರ ಪ್ರತಿಕ್ರಿಯೆಗೆ ತುಂಬು ಹೃದಯದ ಧನ್ಯವಾದಗಳು
ಅಶೋಕ ಉಚ್ಚಂಗಿ