

ಕ್ರಮೇಣ ಭಢ್ತಿ ಪಡೆದು ಬದಲಾಗುತ್ತಾ ಹಿರಿಯರಿಗೂ ಅನ್ವಯವಾಗುತ್ತಾ,ಇಷ್ಟವಾಗುತ್ತಾ ಮಕ್ಕಳ ಕಥೆ,

ಹಿರಿಯರ ಕಥೆ, ಪುರಾಣ,ಇತಿಹಾಸ,ಕಾದಂಬರಿ ಎಂದೆಲ್ಲಾ ವಿಂಗಡಣೆಯಾಗುತ್ತಾ ಇವತ್ತಿನ ಈ ಹಂತಕ್ಕೆ ಬಂದು ತಲುಪಿವೆ.ಎಂದೋ ಎಲ್ಲೋ ಕೇಳಿದ/ನೋಡಿದ ಘಟನೆಗಳು ಬಾಯಿಂದ ಬಾಯಿಗೆ ಹರಡುತ್ತಾ ಕಥೆಯ ರೂಪಪಡೆಯುತ್ತವೆ, ನೀತಿ ಅನೀತಿಗಳ ವಿಮರ್ಶೆ ಕತೆಯ ಹುಟ್ಟಿಗೆ ಕಾರಣವಾಗುತ್ತವೆ.


ತನ್ನ ಪರಿಸರವನ್ನು ಅರ್ಥಮಾಡಿಕೊಳ್ಳುವ ಹಂತದಲ್ಲಿರುವ ಮೂರುನಾಲ್ಕು ವರ್ಷದ ಮಕ್ಕಳಿಗೆ ಕತೆ ಹೇಳಲು ನಮ್ಮಲ್ಲಿ ಪುಸ್ತಕಗಳು ಅಲಭ್ಯ.ಚಂದಮಾಮದ ಕತೆಗಳು,ಪತ್ರಿಕೆ,ಮ್ಯಾಗಝಿನಿನ

ಕತೆಗಳು,ದಿನಕ್ಕೊಂದು ಕತೆ ಇವು ಈ ವಯಸ್ಸಿಗೆ ಅರ್ಥವಾಗದು.

ಆದ್ದರಿಂದ ಎಲ್ಲಾ ತಂದೆತಾಯಂದಿರು,ಅಜ್ಜಅಜ್ಜಿಯರು ತಾವೇ ಪುಟ್ಟಪುಟ್ಟ ಕತೆಗಳನ್ನು ಹೆಣೆಯುತ್ತಾ ಈ ವಯಸ್ಸಿನ ಪುಟಾಣಿಗಳಿಗೆ ಹೇಳುತ್ತಾರೆ ಅನಿಸುತ್ತೆ.


ಇವಳ ಕುತೂಹಲ ತಣಿಸಲು,ನಿದ್ದೆಗೆ ಜಾರಿಸಲು ನನ್ನ ಕಲ್ಪನೆಯೆಂಬ ಸಮುದ್ರಕ್ಕೇ ಗಾಳಹಾಕಿ ಎಲ್ಲೋ ಒಂದು ಕಥಾವಸ್ತುವೆಂಬ ಮೀನು ಹಿಡಿದು ಅದನ್ನೇ ಎಳೆಯುತ್ತಾ ಕಲ್ಪನಾಶಕ್ತಿಗೆ ಸವಾಲು ಹಾಕುತ್ತಾ ಎಂತದೋ ಒಂದು ಕಥೆ ಕಟ್ಟುತ್ತೇನೆ. ಅದು ಎತ್ತೇತ್ತಲೋ ಸಾಗುತ್ತ ಕಡೆಗೂ ಒಂದು
ತಾತ್ವಿಕ ಅಂತ್ಯ ಕಾಣುತ್ತದೆ.ಒಟ್ಟಿನಲ್ಲಿ ‘ದಿನಕ್ಕೊಂದು ಸುಳ್ಳು ಕಥೆ’ ಹೇಳುತ್ತೇನೆ.


ನಾನು; ಮಗು ಯಾವ ಕಥೆ ಹೇಳಲಿ?
ಇಂಪು:ಮಿಯಾಂ ಕಥೆ ಬೇಕು.
ನಾ:ಒಂದೂರಲ್ಲಿ ಒಂದು ಪುಟ್ಟು ಮಿಯಾವ್ ಇತ್ತು.ಅದರ ಹೆಸರೇನು?
ಇಂಪು:ಮಿನ್ನಿ.... (ದಿನಕ್ಕೊಂದು ಹೆಸರು ಕಟ್ಟುತ್ತಾಳೆ
ನಾನು:ಅದು ಒಂದಿನ ಪುಟ್ಟಪಾಪು ಜೊತೆ ಆಟವಾಡುತ್ತಾ ಇತ್ತಂತೆ.ಪಾಪು ಹೆಸರೇನು ಹೇಳು?
ಇಂಪು:ಸ್ವಲ್ಪ ಹೊತ್ತು ಯೋಚಿಸಿ ನಂದನ್.... ಎನ್ನುತ್ತಾಳೆ.
ಹೀಗೆ ಮಗುವಿನೊಂದಿಗೆ ಪ್ರಶ್ನೋತ್ತರದಂತೆ ಕತೆ ಸಾಗುತ್ತದೆ.
ನನ್ನ ಮಗಳಿಗೆ ಕತೆಯ ಮಧ್ಯೆ ಪ್ರಶ್ನೆಗಳು ಏಳುತ್ತವೆ.ಇವೆಲ್ಲವನ್ನೂ ಬಗೆಹರಿಸಿ ಬೆಕ್ಕು ನೀರಿನ ಗುಂಡಿಯಲ್ಲಿ ಬಗ್ಗಿ ನೋಡುತ್ತಾ ನೀರಿಗೆ ಬಿದ್ದಿತಂತೆ,ಆಗ ಪುಟ್ಟ ಪಾಪ ಅವರ ಅಪ್ಪನನ್ನು ಕರೆದು ಮಿಯಾವ್‌ನನ್ನು ಮೇಲೆ ಎತ್ತಿಸಿತಂತೆ.ಮಿನ್ನಿ ಡ್ಯಾನ್ಸ ಮಾಡುತ್ತಾ ಪಾಪುಗೆ ಥ್ಯಾಂಕ್ಸ್ ಹೇಳಿತಂತೆ ಎಂದು ಏನೋ ಒಂದು ಕತೆಕಟ್ಟಿ ಹೇಳುತ್ತೇನೆ.ನೀರಿನ ಹತ್ತಿರ ಒಬ್ಬರೇ ಹೋಗಬಾರದು,ಬಗ್ಗಿನೋಡಬಾರದು ಎಂದು ತಿಳಿಸಿ ಕತೆ ಮುಗಿಸುತ್ತೇನೆ

ಇದರಿಂದ ಮಗುವಿಗೆ ತಪ್ಪು ಒಪ್ಪುಗಳ ಅರಿವಾಗುವುದರೊಂದಿಗೆ,ಸಮಯಪ್ರಜ್ಞೆ,ಪ್ರೀತಿ,ಅನುಕಂಪ ಮೊದಲಾದ ಗುಣಗಳು ಅರಿವಾಗುತ್ತದೆ ಎಂಬ ಅಭಿಪ್ರಾಯ ನನ್ನದು.


ಕಥೆಗಳು ಮಕ್ಕಳಿಗೆ ಎಷ್ಟು ಉಪಯೋಗವೂ ದೊಡ್ಡವರಿಗೂ ಅಷ್ಟೇ ಉಪಯೋಗ.ನಿತ್ಯಬದುಕಿನಲ್ಲಿ ನೂರೆಂಟು ವ್ಯವಹಾರಗಳ ಜಂಜಟಾದಲ್ಲಿ ದೊಡ್ಡದೊಡ್ಡದಾಗಿಯೇ ಯೋಚಿಸುವ ನಾವು ಒಂದೈದು ನಿಮೀಷ ಹೀಗೆ ಸಿಲ್ಲಿ ಕಲ್ಪನೆಗಳನ್ನು ಮನಸ್ಸಿಗೆ ತಂದುಕೊಂಡು ಮಕ್ಕಳೊಂದಿಗೆ ಮಕ್ಕಳಾಗಿ ಬೆರೆತರೆ
ಮನಸ್ಸು ನಿರಮ್ಮಳವಾದಿತೆಂಬುದು ನನ್ನ ಅಭಿಪ್ರಾಯ.


ನಿರೀಕ್ಷಿಸಿ----ಮುಂದೆ ಬರಲಿದೆ--
ಈ ಗೌರಿ ಅಪ್ರತಿಮ ಸುಂದರಿ!!!
6 comments:
ಆಶೋಕ್,
ನನಗೆ ತುಂಬಾ ಖುಷಿಯಾಯಿತು. ನೀವು ಮಕ್ಕಳ ಕತೆ ಬಗ್ಗೆ ಬರೆದಿರುವುದು, ನಿಮ್ಮ ಮಗಳು ಇಂಪು[ಹೆಸರು ತುಂಬಾ ಚೆನ್ನಾಗಿದೆ ನನ್ನಾಕೆ ಇಷ್ಟಪಟ್ಟಳು]ಗೆ ನೀವು ಕತೆ ಹೇಳುವ ಅವಕಾಶವಿದೆ ಅದು great! ನನಗೆ ನನ್ನಜ್ಜಿ ಕತೆ ಹೇಳಿದ್ದರಿಂದ ನಾನು ಹೀಗೆ ಬ್ಲಾಗ್, ಫೋಟೋಗ್ರಪಿ ಬರವಣಿಗೆ ಅಂತ ಒಂದು ಚೂರಾದರೂ ಆಸಕ್ತಿ ಬಂದಿರಬಹುದು. ನನಗನ್ನಿಸುತ್ತೆ. ನಮ್ಮೆಲ್ಲಾ ಬ್ಲಾಗಿಗರು ಕತೆಗಾರರು, ಕವಿಗಳು ಇನ್ನಿತರ ಕ್ಷೇತ್ರಗಳಲ್ಲಿ ಸಾಧನೆಮಾಡಿದವರೆಲ್ಲಾ ಬಾಲ್ಯದಲ್ಲಿ ಕತೆ ಕೇಳಿದವರೇ ಇರಬೇಕು. ನೀವು ಕತೆ ಹೇಳುವುದರಿಂದಲೂ ನಿಮ್ಮ [ಸುಳ್ಳೇ ಸೃಷ್ಟಿಸಲು ತಲೆ ಬೇಕಲ್ಲ]ಸೃಜನಶೀಲತೆ ಹೆಚ್ಚಾಗುತ್ತದೆ. ಬ್ಲಾಗಿನಲ್ಲಿ ಮಕ್ಕಳ ಕತೆಗಳ ಬಗ್ಗೆ ಅದರ ಅನುಭವಗಳ ಹೀಗೆ ಬರೆಯಿರಿ. ವಿಭಿನ್ನವಾಗಿರುತ್ತದೆ.
hey....thumba chanagidhe nimma blog...
makala bage post is also thumba changagide..nimma bere posts also i read.... its nice
good keep writing
thanks for visting nana blog :)
ಅಶೋಕ್,
ನಿಮ್ಮ ಹೊಸ ಬ್ಲಾಗಿಗೆ ಬೆಸ್ಟ್ ಆಫ್ ಲಕ್! ವಿನ್ಯಾಸ ತುಂಬ ಚೆನ್ನಾಗಿದೆ.
ಕೇಶವ (www.kannada-nudi.blogspot.com)
ನಂಗೆ ತುಂಬಾ ಇಷ್ಟವಾಯಿತು ಬರಹ...ನಂಗೂ ಅಮ್ಮ ಕಥೆ ಹೇಳದಿದ್ರೆ ನಿದ್ರೆನೇ ಬರುತ್ತಿರಲಿಲ್ಲ..ನಾನೂ ಮಗುವಾಗಿರಬೇಕಿತ್ತು ಎನಿಸುತ್ತೆ..
-ತುಂಬುಪ್ರೀತಿ,
ಚಿತ್ರಾ
ನಾನೂ ಅನುಪಮಾ ನಿರಂಜನರ ದಿನಕ್ಕೊಂದು ಕಥೆ ಓದಿ ಬೆಳೆದವನೇ! ಚೆನ್ನಾಗಿದೆ ನಿಮ್ಮ ಬರಹ.
ಥ್ಯಾಂಕ್ಸ್.ನಾನು ನಿಮ್ಮ ಎಲ್ಲಾ ಬರಹಗಳನ್ನು ಓದಿರಲಿಲ್ಲ:(.ನೀವು ಕಥೆಹೇಳುವ ಶೈಲಿ ತುಂಬಾ ಇಷ್ಟವಾಯ್ತು. ನೀವು ಹೇಳಿದ್ದು ನಿಜ ನಾಲ್ಕೈದು ವರ್ಷದ ಒಳಗಿರುವ ಮಕ್ಕಳಿಗೆ ಈ ತರಹದ ಕಥೆಗಳೇ ಸೂಕ್ತ ಅನಿಸುತ್ತೆ, ಹೆಚ್ಚು ಸುಳ್ಳು ಕಥೆಗಳ ನಿರೀಕ್ಷೆಯಲ್ಲಿದ್ದೇನೆ.ಒಳ್ಳೆ ಫೋಟೋಗ್ರಾಫರ್ ಅಲ್ಲದೇ ಒಳ್ಳೆ ಕಥೆಗಾರರೂ ಆಗಿದ್ದೀರಿ.ಮಕ್ಕಳು ಇಷ್ಟಪಡುವ ಹಾಗೆ ಕಥೆ ಹೇಳುವುದು ಸುಲಭದ ಮಾತಲ್ಲ.
Post a Comment