ಚಿತ್ರ ನನ್ನದು ಕಲ್ಪನೆ ನಿಮ್ಮದು......!
ಯುಗಾದಿಯ ಹಾರ್ದಿಕ ಶುಭಾಶಯಗಳು
ನಾನು ನನ್ನ ಈ ಹಿಂದಿನ ಬ್ಲಾಗ್ ಪೋಸ್ಟಿನಲ್ಲಿ ಮೂರು ಚಿತ್ರಗಳನ್ನು ಹಾಕಿ ಯುಗಾದಿಯ ಕಲ್ಪನೆಗೆ ಓದುಗರಿಂದ ಬರಹಗಳನ್ನು ಆಹ್ವಾನಿಸಿದ್ದೆ.ಅನೇಕರು ಚಿತ್ರಗಳು ಚೆನ್ನಾಗಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರೆ ಇನ್ನೂ ಅನೇಕರು ಈ ಚಿತ್ರಗಳಿಗೆ ಯುಗಾದಿಯ ಚಿಂತನೆ ಕಳುಹಿಸಿದ್ದಾರೆ.ಈ ಮೂರೂ ಚಿತ್ರಗಳಿಗೂ ಹೊಂದಿಕೆಯಾಗುವಂತೆ ಸರಳ, ಸುಂದರ ಸಂದೇಶ ಕಳುಹಿಸಿದವರು ಬ್ಲಾಗಿಗ ಈಶ್ವರ "ಕಿರಣ" ಭಟ್ http://kiranakomme.wordpress.com/ ನನ್ನ ಚಿತ್ರಕ್ಕೆ “ ಕಿರಣ್ ”ಅವರ ಕಲ್ಪನೆಯಲ್ಲಿ ಯುಗಾದಿ ಹಾರೈಕೆ ಇಂತಿದೆ...

ಬಿದ್ದ ಹೂವು - ಬಿದ್ದ ನೋವಾಗಲಿ
ಆರಿಸಿದ ಹೂವು - ಹರಸಿದ ಬದುಕಾಗಲಿ
ಬೇವಿನ ಚಿಗುರು - ನೋವಿಗೆ ಕಹಿಯಾಗಲಿ
ಅಶ್ವಥದ ಚಿಗುರು ಸಮೃಧ್ಧ ಬದುಕಿಗೆ ಸಂಕೇತವಾಗಲಿ
"ಮೌನ ತಬ್ಬಿತು ನೆಲವ ಜುಮ್ಮೆನೆ ಪುಳಕಗೊಂಡಿತು ಧಾರಿಣಿ "
ಎಷ್ಟು ಅರ್ಥಗರ್ಭಿತ ಅಲ್ಲವೇ?
ಕಿರಣ್ ಅವರಿಗೆ ಧನ್ಯವಾದ...
ಇನ್ನು ಮುಂದೆಯೂ ಚಿತ್ರ-ಕಲ್ಪನೆ ವಿಭಾಗದಲ್ಲಿ ಚಿತ್ರಗಳನ್ನು ಹಾಕಿ ನಿಮ್ಮ ಅನಿಸಿಕೆಗಳನ್ನು ಆಹ್ವಾನಿಸುವ ಚಿಂತನೆ ನನಗಿದೆ.ನೀವುಗಳೂ ಸ್ಪಂದಿಸುತ್ತೀರೆಂಬ ವಿಶ್ವಾಸದಲ್ಲಿದ್ದೇನೆ...
ಯುಗಾದಿ ಚಿಂತನೆಯನ್ನು ಹಂಚಿಕೊಂಡ ವೀರೇಶ್ ತಾವರೆಕೆರೆ,"ಸಹಜ",ವಿಶ್ವಾಸ್ ಅವರಿಗೆ ಹಾಗೂ ಪ್ರತಿಕ್ರಿಯಿಸಿದ ಚುಕ್ಕಿಚಿತ್ತಾರ,ಶಂಭುಲಿಂಗ,ದೀಪಸ್ಮಿತ ಅವರಿಗೂ ನನ್ನ ಧನ್ಯವಾದಗಳು.ತಮಗೆಲ್ಲರಿಗೂ ಯುಗಾದಿಯ ಶುಭ ಹಾರೈಕೆಗಳು.
**** ಅಶೋಕ ಉಚ್ಚಂಗಿ *****