
ಪ್ರಿಯ ಬ್ಲಾಗ್ ಮಿತ್ರರೇ.....
ಅನೇಕ ಬ್ಲಾಗ್ ಗೆಳೆಯರ ಲೇಖನವನ್ನು ಓದುತ್ತಿದ್ದಾಗ ನನ್ನ ಬ್ಲಾಗಿನಲ್ಲೂ ಹೊಸ ವಿಷಯಗಳನ್ನು ಬರೆಯಲು ಮನಸ್ಸು ಬರುತ್ತೆ.ಆದರೆ ಕೆಲಸದ ಒತ್ತಡ ಜೊತೆಗೆ ಸೋಮಾರಿತನದ ಸಲುವಾಗಿ ಸಾಧ್ಯವಾಗುತ್ತಿಲ್ಲ.
ಇಂದು ಏನಾದರು ಬರೆಯೋಣವೆಂದು ಕುಳಿತಾಗ ಹಾಗೆ ಸುಮ್ಮನೆ ಚಿತ್ರವೊಂದನ್ನು ಹಾಕೋಣ ಎಂದುಕೊಂಡೆ.ಬರಿ ಚಿತ್ರವನ್ನು ಹಾಕುವ ಬದಲಿಗೆ ಕಲ್ಪನೆಗೆ ಇಂಬು ನೀಡುವಂತಹ ಚಿತ್ರವನ್ನು ಹಾಕುವ ಮನಸ್ಸಾಯಿತು.ಯುಗಾದಿ ಹೇಗಿದ್ದರೂ ಹತ್ತಿರವಿದೆ...ಅದೇ ಗುಂಗಿನಲ್ಲಿದ್ದ ನನಗೆ ಯುಗಾದಿಗೆ ಸಂಬಂಧಿಸಿದಂತೆ ಛಾಯಾಚಿತ್ರವೊಂದನ್ನು ಹಾಕಿ ಬ್ಲಾಗಿಗರ ಕಲ್ಪನೆಯಲ್ಲಿ ಯುಗಾದಿಯ ಚಿಂತನೆ ಹೇಗೆ ವ್ಯಕ್ತವಾಗುತ್ತೆ ಎಂದು ನೋಡುವ ಮನಸ್ಸಾಯಿತು...ಇದೋ ಇಲ್ಲಿದೆ ಚಿತ್ರಗಳು.....ನಿಮ್ಮ ಕಲ್ಪನೆಯಲ್ಲಿ ಯುಗಾದಿಯ ಹಾದಿಯಲ್ಲಿನ ಪ್ರಕೃತಿ ಕವಿತೆಯಾಗಿ,ಹಾಡಾಗಿ,ಮನದಾಳದ ಮಾತಾಗಿ,ಚಿಂತನೆಯಾಗಿ,ಸೊಗಸಾದ ಪದಗಳನ್ನು ಜೋಡಿಸಿದ ಸುಂದರ ಸಾಲಾಗಿ ಹೊರಹೊಮ್ಮುತ್ತದೆಂದು ಭಾವಿಸಿದ್ದೇನೆ.

ಖಂಡಿತಾ ಬರೀತೀರಿ ತಾನೇ.....?
4 comments:
chitragalu chennaagive..
bellada chitravannoo haakiddare ugaadige bevu, bella aaguttittu....!
ಚೆನ್ನಾಗಿದೆ ಚಿತ್ರಗಳು.
ಒಳ್ಳೆಯ ಚಿತ್ರಗಳು. ಬೇವು ಬೆಲ್ಲ ಜೀವನದ ಅವಿಭಾಜ್ಯ ಅಂಗ. ಬೇವು ಕಹಿ ಇರಬಹುದು, ಆದರೆ ಅತ್ಯುತ್ತಮ ಔಷಧಿ. ಹಾಗೆಯೇ, ಕಹಿಯಾದ ಕಷ್ಟಗಳು ಒಂದರ್ಥದಲ್ಲಿ ಔಷಧಿಗಳೇ, ನಮಗೆ ಅಷ್ಟು ಬೇಗ ಗೊತ್ತಾಗುವುದಿಲ್ಲ ಅಷ್ಟೆ. ನಿಮಗೂ ಯುಗಾದಿಯ ಹಾರ್ದಿಕ ಶುಭಾಷಯಗಳು. ನಿಮ್ಮಿಂದ ಇನ್ನಷ್ಟು ಚಿತ್ರಗಳನ್ನು ನಿರೀಕ್ಷಿಸುತ್ತಿದ್ದೇನೆ
awesome great work,hope will do best in coming days of ur future.best photography award is near to u soon
Post a Comment